ಕಬ್ಬಿನ ಹಾಲು ಏಕೆ ಕುಡಿಯಬೇಕು?

ಕಬ್ಬಿನ ಹಾಲು ಏಕೆ ಕುಡಿಯಬೇಕು?

ಪೌಷ್ಟಿಕಾಂಶಗಳ ಆಗರ,ಬಡವರ ಅಮೃತ ಎಂದು ಹೆಸರಾಗಿರುವ ಕಬ್ಬಿನಹಾಲು ನಮ್ಮ ನಿಮ್ಮೆಲ್ಲರ ದಿನನಿತ್ಯದ ಚಟುವಟಿಕೆಗಳನ್ನು ನಡೆಸಲು,ಆರೋಗ್ಯ ಹಾಗು ಸ್ಪೂರ್ತಿದಾಯಕವಾದ ನೈಸರ್ಗಿಕ ಪಾನೀಯ ವಾಗಿದೆ.ಪ್ರಪಂಚದಲ್ಲಿಯೇ ಅತಿ ಹೆಚ್ಚು ಕಬ್ಬು ಬೆಳೆ ಯುವ ಹಾಗು ಸಕ್ಕರೆಯನ್ನು ಉತ್ಪಾದಿಸುವ ದೇಶ ವೆಂದರೆ ಅದು ನಮ್ಮ ಭಾರತ.

ಕಬ್ಬಿನಹಾಲು ಕುಡಿಯುವುದರಿಂದ ಆಗುವ ಪ್ರಯೋಜನಗಳು.

1. ಸ್ಪೂರ್ತಿ, ಚೈತನ್ಯ ಉಂಟು ಮಾಡುತ್ತದೆ.   

ಇದರಲ್ಲಿರುವ ನೈಸರ್ಗಿಕ ಗ್ಲುಕೋಸ್ , ಎಲೆಕ್ಟ್ರೋ ಲೈಟ್ಗಳು ,ಉತ್ತಮ ರೀತಿಯ ಕಾರ್ಬೋಹೈಡ್ರೇಟ್ಗಳು, ಪ್ರೋಟೀನ್, ಕಬ್ಬಿಣ, ಪೊಟ್ಯಾಸಿಯಮ್ ಮತ್ತು ಇತರ ಅಗತ್ಯ ಪೋಷಕಾಂಶಗಳು ದೇಹದಲ್ಲಿ ಸುಲಭವಾಗಿ ಬೆರೆತು ತಕ್ಷಣಕ್ಕೆ ಸ್ಪೂರ್ತಿ, ಚೈತನ್ಯ ಉಂಟು ಮಾಡು ತ್ತವೆ. ದೇಹವನ್ನು ಪುನರ್ಜಲೀಕರಣಗೊಳಿಸಿ ಆಯಾಸವನ್ನು ಹೋಗಲಾಡಿಸುತ್ತದೆ.

2.ಮೂತ್ರವಿಸರ್ಜನೆಗೆ ಪರಿಣಾಮಕಾರಿ.

ಬ್ಬಿನಹಾಲಿಗೆ ಒಂದು ಚಮಚ ಲಿಂಬೆರಸ ಹಾಗು ಶುಂಠಿ ರಸವನ್ನು ಬೆರೆಸಿ ಕುಡಿಯು ವುದರಿಂದ ಉರಿಮೂತ್ರ ಶಮನ ಮಾಡಿ ಸರಳ ಮೂತ್ರ ವಿಸರ್ಜನೆಗೆ ಸಹಾಯ ಮಾಡುತ್ತದೆ. ಮೂತ್ರಪಿಂಡ ಗಳನ್ನು ಅತ್ಯುತ್ತಮ ಸ್ಥಿತಿಯಲ್ಲಿ ಕಾರ್ಯನಿರ್ವಹಿಸು ವಂತೆ ಮಾಡುತ್ತದೆ, ಹೀಗಾಗಿ ಮೂತ್ರ ಪಿಂಡದ ಕಲ್ಲುಗಳು ಮತ್ತು ಮೂತ್ರದ ಸೋಂಕಿನಂತಹ ಆರೋಗ್ಯ ಸಮಸ್ಯೆಗಳನ್ನು ತಪ್ಪಿಸುತ್ತದೆ.

3. ದಂತಕುಳಿ ಮತ್ತು ಕೆಟ್ಟ ಉಸಿರಾಟವ ನ್ನು ಹೋಗಲಾಡಿಸುತ್ತದೆ.

ಇದರಲ್ಲಿರುವ ಕ್ಯಾಲ್ಸಿಯಂ, ರಂಜಕ ಹಾಗು ಇತರ ಪೋಷಕಾಂಶಗಳು ಹಲ್ಲುಗಳ ದಂತ ಕವಚವನ್ನು ಬಲಪಡಿಸಿ ಕೊಳೆಯದಂತೆ ರಕ್ಷಿಸುವುದಲ್ಲದೆ ದುರ್ವಾಸನೆಯ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

4.ಅರಿಶಿನಕಾಯಿಲೆಗೆ ಪರಿಹಾರ.

ಆಯುರ್ವೇದ ಆರೋಗ್ಯ ಶಾಸ್ತ್ರದ ಪ್ರಕಾರ, ಕಬ್ಬಿನ ರಸದಲ್ಲಿರುವ ಉತ್ಕರ್ಷಣ ನಿರೋಧಕಗಳು ಯಕೃತ್ತ ನ್ನು ಸೋಂಕಿನಿಂದ ರಕ್ಷಿಸುತ್ತವೆ.ಕಬ್ಬಿನ ರಸವು ಕ್ಷಾರೀಯವಾಗಿ ದ್ದು, ನಿಮ್ಮ ದೇಹದಲ್ಲಿನ ಎಲೆಕ್ಟ್ರೋ ಲೈಟ್ ಸಮತೋಲನ ಮತ್ತು ಗ್ಲೂಕೋಸ್ ಮಟ್ಟವನ್ನು ಕಾಪಾಡಿಕೊಳ್ಳುವ ಮೂಲಕ ಕಾಮಾಲೆಯಂತಹ ಅನೇಕ ಯಕೃತ್ತಿನ ಸಮಸ್ಯೆಗಳನ್ನು ದೂರವಿರಿಸಲು ಸಹಾಯ ಮಾಡುತ್ತದೆ

5.ಜೀರ್ಣಕ್ರಿಯೆಯನ್ನು ಸುಲಭ ಗೊಳಿಸುತ್ತದೆ.

ಇದರಲ್ಲಿರುವ ಅಧಿಕ ಪೊಟ್ಯಾಸಿಯಮ್ ಕರುಳಿ ನಲ್ಲಿರುವ ಆಮ್ಲದ ph ಮಟ್ಟವನ್ನು ಸಮತೋಲ ನದಲ್ಲಿರಿಸಿ ಜೀರ್ಣಕಾರಿ ರಸಗಳ ಸ್ರವಿಸುವಿಕೆಯನ್ನು ಉತ್ತೇಜಿಸಿ ಜೀರ್ಣಕ್ರಿಯೆಯನ್ನು ಸುಲಭವಾಗಿಸುತ್ತದೆ.

6.ಚರ್ಮದ ಆರೋಗ್ಯಕ್ಕೆ ಸಹಾಯಕಾರಿ.

ಇದರಲ್ಲಿರುವ ಉತ್ಕರ್ಷಣ ನಿರೋಧಕ ಗಳು, ಫೀನಾ ಲಿಕ್ ಆಮ್ಲ ಮತ್ತು ಫ್ಲೇವನಾಯ್ಡ್ ಗಳು ಚರ್ಮವನ್ನು ಒಳಗಿನಿಂದ ಆರ್ದ್ರಗೊಳಿಸಿ ಮೃದುವಾಗಿ ಹೊಳೆಯು ವಂತೆ ಮಾಡಲು ಸಹಾಯ ಮಾಡುತ್ತದೆ.

7.ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಕಬ್ಬಿನಹಾಲು ವಿಟಮಿನ್ ಸಿ, ಉತ್ಕರ್ಷಣ ನಿರೋ ಧಕಗಳು ಹಾಗು ಫ್ಲೇವನಾಯ್ಡುಗಳ ಉತ್ತಮ ಮೂಲ ವಾಗಿದ್ದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

8.ಮೊಡವೆಗಳ ನಿವಾರಣೆಗೆ ಸಹಾಯ ಮಾಡುತ್ತದೆ .

ಇದರಲ್ಲಿರುವ ಆಲ್ಫಾ-ಹೈಡ್ರಾಕ್ಸಿ ಆಮ್ಲಗಳು ಹಾಗು ಗ್ಲೈಕೋಲಿಕ್ ಆಸಿಡ್ ಗಳು ಚರ್ಮ ದಲ್ಲಿರುವ ಕೊಬ್ಬಿನಾಂಶಗಳನ್ನು ನಿಯಂತ್ರಿಸಿ ಮೊಡವೆಗಳನ್ನು ಹೋಗಲಾಡಿಸುತ್ತವೆ.

10.ದೇಹದ ತೂಕ ಹಾಗು ಬೊಜ್ಜು ನಿಯಂತ್ರಿಸಲು ಸಹಕಾರಿ.

ಇದರಲ್ಲಿರುವ ಅಧಿಕ ನಾರಿನಂಶಗಳು, ಪ್ರೋಟೀನ್ಗಳು, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಕಬ್ಬಿಣ, ಸತು ಮತ್ತು ವಿವಿಧ ಪೋಷಕಾಂಶಗಳು ಅನಗತ್ಯವಾದ ಕೊಲೆ ಸ್ಟ್ರಾಲ್ ಕರಗಿಸುವಲ್ಲಿ ಸಹಕಾರಿಯಾಗಿವೆ.

 

 

Back to blog

Leave a comment